ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಧ್ಯೇಯದೊಂದಿಗೆ 1947 ರಲ್ಲಿ ಸ್ಥಾಪಿಸಲ್ಪಟ್ಟ ಕೆನರಾ ಕಾಲೇಜು ಸೊಸೈಟಿಯು ಕಾಲೇಜು ಶಿಕ್ಷಣದಲ್ಲಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಪ್ರಶಿಕ್ಷಣ ಮಹಾವಿದ್ಯಾಲಯವನ್ನು ಆರಂಭಿಸಿ ಕೀರ್ತಿ ಹಾಗೂ ಹೆಸರನ್ನು ಗಳಿಸಿ ತದನಂತರ ಜಿಲ್ಲೆಯಲ್ಲಿ ಅವಶ್ಯವಿರುವ ತಾಂತ್ರಿಕ ಶಿಕ್ಷಣದ ಅವಶ್ಯಕತೆಯನ್ನು ಮನಗಂಡು 1985 ರಲ್ಲಿ ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಿತು. ಇದು ಇದರ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಮುತ್ತನ್ನು ಅಳವಡಿಸಿದಂತಾಯಿತು ಈ ಸಂಸ್ಥೆಯು ಸುಂದರ ಪರಿಸರ ಮತ್ತು ಆವರಣವನ್ನು ಹೊಂದಿರುವುದು ಶಿಕ್ಷಣಕ್ಕೆ ಪ್ರಾಶಸ್ತ್ಯ ಸ್ಥಳವಾಗಿದೆ. Read More...

 

ದೂರದೃಷ್ಟಿ(Vision)

  • ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯಮವಲಯದ ಬೇಡಿಕೆಗೆ ಅನುಗುಣವಾಗಿ ಉನ್ನತ ಮಟ್ಟದ ತಾಂತ್ರಿಕ ಶಿಕ್ಷಣ ನೀಡಲು ಪೂರಕವಾದ ಮೂಲಭೂತ ಸೌಕರ್ಯಗಳನ್ನು ನೀಡಿ ಮಹೋನ್ನತ ತಂತ್ರಜ್ಞರನ್ನು ರೂಪಿಸಿ ಉತ್ತಮ ಶ್ರೇಣಿಯ ಸಂಸ್ಥೆಯನ್ನಾಗಿಸಿ  ಬೆಳೆಸುವುದು.

 ನಿರ್ದಿಷ್ಟ ಪಡಿಸಿದ ಗುರಿ(Mission)

  • ಪ್ರಸ್ತುತ ವಿದ್ಯಾರ್ಥಿಗಳಿಗೆ ಅವಶ‍್ಯವಿರುವ ತಾಂತ್ರಿಕ ಕೌಶಲ್ಯಗಳನ್ನು ಒದಗಿಸಿ ಸಮಾಜದ ಅವಶ‍್ಯಕತೆಗೆ ತಕ್ಕಂತೆ ನೈತಿಕ ಮೌಲ್ಯಯುತ ಜವಾಬ್ದಾರಿಯುತ ವೃತ್ತಿ ನಿರತರನ್ನಾಗಿ ರೂಪಿಸುವುದು.

  • ವಿದ್ಯಾರ್ಥಿಗಳಿಗೆ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಸೂಕ್ತ ಯೋಜನೆಯ ಮೂಲಕ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಜಾಗೃತೆ ಮೂಡಿಸುವುದು.

  • ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆ ಬಗ್ಗೆ ಗೌರವ ಬೆಳೆಸಿಕೊಳ್ಳಲು ಮತ್ತು ಕರ್ತವ್ಯವನ್ನು ನಿಭಾಯಿಸಲು ಅರಿವು ಮೂಡಿಸಿ ಉತ್ತಮ ನಾಗರಿಕರಾಗಲು ಪ್ರೇರೇಪಿಸುವುದು.

ಕೋರ್ಸುಗಳ ವಿವರ:-

ಅ.ನಂ. ಕೋರ್ಸು ವಿವರ ಇಂಟೇಕ್ ಮಿತಿ
1 ಮೆಕ್ಯಾನಿಕಲ್ ಇಂಜನೀಯರಿಂಗ್ (ಜನರಲ್) 54
2 ಸಿವಿಲ್ ಇಂಜನೀಯರಿಂಗ್ 41
3 ಇಲೆಕ್ಟ್ರಾನಿಕ್ಸ & ಕಮ್ಯುನಿಕೇಶನ್ ಇಂಜನೀಯರಿಂಗ್ 54
4 ಕಂಪ್ಯೂಟರ್ ಸಾಯಿನ್ಸ & ಇಂಜನೀಯರಿಂಗ್ 54
5 ಅಟೊಮೋಬೈಲ್ ಇಂಜನೀಯರಿಂಗ್ 27

 

ವರ್ತಮಾನ ವಿಷಯಗಳು
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ (09-05-2019)

ಸೇವೆಯಿಂದ ನಿವೃತ್ತರಾದ ಶ್ರೀಯುತ ಕುತುಬುದ್ದೀನ್ ಸಾಬ್, ಬೋಧಕರು, ಸಿವಿಲ್ ವಿಭಾಗ, ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ (30-04-2019)

ಸಂವಿಧಾನ ಶಿಲ್ಪಿ ಶ್ರೀ ಭೀಮರಾವ್ ಅಂಬೇಡ್ಕರ್‌ರವರ ಜಯಂತಿ ಆಚರಣೆ (14-04-2019)

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ (02-04-2019)

ಸಾಂಪ್ರದಾಯಿಕ ಉಡುಗೆಯ ದಿನಾಚರಣೆ (ದಿನಾಂಕ : 23-03-2019)

ವಾರ್ಷಿಕ ಸ್ನೇಹ ಸಮ್ಮೇಳನ - 2019

ಆರನೇ ಸೆಮಿಸ್ಟರ್‌ನ ಕಂಪ್ಯೂಟರ್‌ ಸೈನ್ಸ್ ವಿದ್ಯಾರ್ಥಿಗಳಿಗಾಗಿ "Internet of Things" ಕುರಿತಾಗಿ ಮೂಡ್ಲಕಟ್ಟೆ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಕುಂದಾಪುರ, ಇವರಿಂದಎರಡು ದಿನಗಳ ಕಾರ್ಯಾಗಾರ (ದಿ. 15-03-2019 ಮತ್ತು 16-03-2019)

JSW ತೋರಣಗಲ್ಲು, ಬಳ್ಳಾರಿ ಇವರಿಂದ ನಮ್ಮ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ (12-03-2019)

ವಿದ್ಯಾಲಯದ ನೂತನ ಕಟ್ಟಡದ ಕೋನಶಿಲಾನ್ಯಾಸ ಸಮಾರಂಭ - ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠಾದೀಶ ಶ್ರೀ ಶ್ರೀ ಶ್ರೀಮದ್ ವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು ಮತ್ತು ಪಟ್ಟಶಿಷ್ಯ ಶ್ರೀಮದ್ ವಿದ್ಯಾದೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜ ಇವರ ದಿವ್ಯ ಸಾನಿಧ್ಯದಲ್ಲಿ (ದಿ. 11-03-2019, ಸಮಯ: 11.30 ಬೆಳಿಗ್ಗೆ)

"ಪರ್ಯಾಯ ಸಂಪನ್ಮೂಲ"ಗಳ ಕುರಿತು ಉದ್ಯಮಿ ಶ್ರೀ ಜಿ.ಆರ್. ಉಗ್ರು ಇವರಿಂದ ವಿಶೇಷ ಉಪನ್ಯಾಸ (ದಿ. 08-03-2019)

"ದಾಖಲಾತಿ ಆಂದೋಲನ - 2019" ಅಂಗವಾಗಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳಿಗೆ ಭೇಟಿ

"ಮತದಾರರ ದಿನ" ಪ್ರಯುಕ್ತ ನಡೆದ ಜಾಥಾದಲ್ಲಿ ಭಾಗಿಯಾದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು (01-03-2019)

Centum Electronics ಇವರಿಂದ ಕ್ಯಾಂಪಸ್ ಸಂದರ್ಶನ (01-03-2019)

ಮತದಾನದ ಮಹತ್ವದ ಕುರಿತು ಕಾರ್ಯಕ್ರಮ ಮತ್ತು ನೂತನ ಮತದಾರರ ನೋಂದಣಿ(25-02-2019)

TAFE ದೊಡ್ಡಬಳ್ಳಾಪುರ, ಇವರಿಂದ ಸಂಸ್ಥೆಯ ವಿದ್ಯಾರ್ಥಿಗಳಿಗ ಕ್ಯಾಂಪಸ್ ಸಂದರ್ಶನ (ದಿ. 19-02-2019)

ಎಸ್.ಎಂ.ಡಿ. ಇಲ್ಯುಮಿನಾ ಸೊಲುಶನ್ಸ್, ಕಾಸರಕೋಡು ಮತ್ತು ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್, ಕುಮಟ ಮಾಡಿಕೊಂಡ MoU

ಕಾಶ್ಮೀರದಲ್ಲಿ ಹುತಾತ್ಮರಾದ ಸೈನಿಕರ ಗೌರವಾರ್ಥ ಮೌನಾಚರಣೆ (ದಿ. 18-02-2019)

ಆರನೇ ಸೆಮಿಸ್ಟರ್‌ನ ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳಿಗೆ "ANSYS Software" ಕುರಿತು 2 ದಿನಗಳ ಕಾರ್ಯಾಗಾರ (16-02-2019 ಮತ್ತು 17-02-2019)

ರಸ್ತಾ ಸುರಕ್ಷಾ ಸಪ್ತಾಹ ಆಚರಣೆ ಮತ್ತು ಸಂಚಾರಿ ನಿಯಮಗಳ ಕುರಿತು ತಿಳುವಳಿಕಾ ಕಾರ್ಯಕ್ರಮ (ದಿನಾಂಕ 09-02-2019)

"ಮಹಿಳೆ ಮತ್ತು ಆರೋಗ್ಯ" ಕುರಿತು ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಡಾ. ಸುಗಂಧಿ ಪಿ. ಶೆಟ್ಟಿ ಇವರಿಂದ ವಿಶೇಷ ಉಪನ್ಯಾಸ (ದಿ:31-01-2019)

ಹುತಾತ್ಮರ ದಿನಾಚರಣೆ (ದಿ:30-01-2019)

ಶ್ರೀ ನರೇಂದ್ರ ಮೋದಿ, ಪ್ರಧಾನ ಮಂತ್ರಿಯವರು ನಡೆಸಿಕೊಟ್ಟ "ಪರೀಕ್ಷಾ ಪೆ ಚರ್ಚಾ" ಕಾರ್ಯಕ್ರಮದ ವೀಕ್ಷಣೆ - ಯೂಟ್ಯೂಬ್ ಲೈವ್ ಮುಖಾಂತರ (ದಿ:29-01-2019)

ಗಣರಾಜ್ಯೋತ್ಸವ ದಿನಾಚರಣೆ (ದಿ. 26-01-2019)

"ವ್ಯಕ್ತಿತ್ವ ನಿರ್ಮಾಣಕ್ಕೆ ಸ್ವಾಮಿ ವಿವೇಕಾನಂದರ ಸಂದೇಶಗಳು" ಈ ಕುರಿತು ರಾಮಕೃಷ್ಣಾಶ್ರಮ ಸ್ವಾಮೀಜಿಗಳಿಂದ ವಿಶೇಷ ಉಪನ್ಯಾಸ (ದಿ:23-01-2019)

ಎ.ಐ.ಸಿ.ಟಿ.ಇ. ಇವರು ನಡೆಸಿದ "ಛಾತ್ರ ಪುರಸ್ಕಾರ ಸಮಾರಂಭ"ದ ನೇರಪ್ರಸಾರ - ಫೇಸ್‌ಬುಕ್ ಲೈವ ಮೂಲಕ (ದಿ.21-01-2019)

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ "ವೃತ್ತಿಯೋಜನೆ" ಕುರಿತು ASDIT, Kumta ಇವರಿಂದ ವಿಶೇಷ ಕಾರ್ಯಾಗಾರ (ದಿನಾಂಕ: 19-01-2019)

2018-19ರ ಸಮ-ಸೆಮಿಸ್ಟರ್ ಗಳ ಸೆಕ್ಷನ್ ವೇಳಾಪಟ್ಟಿಗಳು

"ರಾಷ್ಟ್ರೀಯ ಏಕತಾ ದಿನ" ಆಚರಣೆ (31-10-2018)

MHRD-Innovation Cell ಇವರಿಂದ ಫೇಸ್‌ಬುಕ ಮೂಲಕ ಸಂಸ್ಥೆಗಳೊಂದಿಗೆ ನೇರ ಸಂವಾದ

2018-19 ನವಂಬರ್-ಡಿಸೆಂಬರ ಸೆಮಿಸ್ಟರ್‍ ಪರೀಕ್ಷಾ ವೇಳಾಪಟ್ಟಿ

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ(24-10-2018)

ಶಾರದಾ ಪೂಜಾ ಕಾರ್ಯಕ್ರಮ (17-10-2018)

ಪ್ರೊ. ರಾಜಕುಮಾರ, ವಿಭಾಗ ಮುಖ್ಯಸ್ಥರು, ಎ.ಐ.ಟಿ.ಎಂ. ಭಟ್ಕಳ ಇವರಿಂದ "ಮೈಕ್ರೋವೇವ್ ಮತ್ತು ರಾಡಾರ್" ಕುರಿತು ವಿಶೇಷ ಉಪನ್ಯಾಸ (12-10-2018)

ಪ್ರೊ. ಶ್ರೀಶೈಲ ಭಟ್, ಎ.ಐ.ಟಿ.ಎಂ. ಭಟ್ಕಳ ಇವರಿಂದ "ARM Controller" ಕುರಿತು ವಿಶೇಷ ಉಪನ್ಯಾಸ (12-10-2018)

"ಕಾನೂನು ಮತ್ತು ಪಾಲನೆ" ಕುರಿತು ಶ್ರೀ ಸಂತೋಷ ಶೆಟ್ಟಿ, ವೃತ್ತ ನಿರೀಕ್ಷಕರು, ಕುಮಟಾ, ಇವರಿಂದ ವಿಶೇಷ ಉಪನ್ಯಾಸ [11-10-2018]

"ಮಾನಸಿಕ ಆರೋಗ್ಯ ತಿಳುವಳಿಕೆ" ಕುರಿತು ಕಾರ್ಯಾಗಾರ. ಶ್ರೀಯುತ ಶರಣ್ ನಾಯಕ, ವಕೀಲರು, [06-10-2018]

ಪ್ರೊ. ಅನಿಲ್ ಕಡ್ಲೆ ಇವರಿಂದ "Electronic Products Design" ಕುರಿತು ವಿಶೇಷ ಉಪನ್ಯಾಸ [ 05-10-2018]

"ಸ್ವಚ್ಛತೆಯೇ ಸೇವೆ" ಮತ್ತು ಮಹಾತ್ಮಾ ಗಾಂಧಿ ಜಯಂತಿ ಆಚರಣೆ (02-10-2018)

"ಇಂಜನಿಯರ್‌ ದಿನ" ಆಚರಣೆ (15-09-2018)

ಸಂಸ್ಥೆಯ ಕರ್ತವ್ಯದಿಂದ ನಿವೃತ್ತರಾದ ಶ್ರೀ ಪುರುಷೋತ್ತಮರವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ (03-09-2018)

ಜಿಂದಾಲ್‌ ಸ್ಟೀಲ್ ವರ್ಕ್ಸ್, ಬಳ್ಳಾರಿ, ಇವರಿಂದ ಕ್ಯಾಂಪಸ್ ಸಂದರ್ಶನ (23-08-2018)

ಸಂಸ್ಥಾಪನೆ ದಿನಾಚರಣೆ ಮತ್ತು ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿ ಸಂದೇಶ ಶೆಟ್ಟಿಗೆ ಸನ್ಮಾನ (19-08-2018)

ಕುಮಟಾ ಉಪವಿಭಾಗಾಧಿಕಾರಿಗಳಿಂದ ನಮ್ಮ ವಿದ್ಯಾಲಯದ ವಿದ್ಯಾರ್ಥಿ ಕು. ಸಂದೇಶ ನಾಯ್ಕನಿಗೆ ಸನ್ಮಾನ (15-08-2018)

ಎರಡನೇ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳ ಪಾಲಕರೊಂದಿಗೆ ಸಂವಾದ (09-07-2018)

ಪ್ರಥಮ ವರ್ಷದ ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ಸಂವಾದ (02-07-2018)

ವಿಶ್ವ ಯೋಗ ದಿನಾಚರಣೆ (21-06-2018)

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ (13-04-2018)