ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್  ಅಲುಮ್ನಿ ಅಸೋಸಿಯೇಶನ್

ನವೆಂಬರ್ 2004 ರಲ್ಲಿ ನಮ್ಮ ವಿದ್ಯಾಲಯದಲ್ಲಿ ಹಳೇ ವಿದ್ಯಾರ್ಥಿ ಸಂಘವನ್ನು ಪ್ರಾರಂಭಿಸಲಾಯಿತು. ಸಂಘವನ್ನು ಪ್ರಾರಂಭ ಮಾಡುವ ಮೊದಲು ಹಳೆ ವಿದ್ಯಾರ್ಥಿಗಳನ್ನು ಕರೆಯಿಸಿ ಸುಧೀರ್ಘವಾಗಿ ಚರ್ಚಿಸಿ ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್  ಅಲುಮ್ನಿ ಅಸೋಸಿಯೇಶನ್ ಎಂತಾ ನಾಮಕರಣ ಮಾಡಿ ಪ್ರಾರಂಭಿಸಲಾಯಿತು. ಈ ಕೆಳಗಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಮತ್ತು ಅವುಗಳ ವಿವಿರ ಈ ಕೆಳಗಿನಂತಿದೆ.

ಪದನಾಮ

ಹೆಸರು

ಅಧ್ಯಕ್ಷರು

ಶ್ರೀ ರತನ ಯು ಗಾಂವಕರ,  ಪ್ರಾಂಶುಪಾಲರು

ಉಪಾಧ್ಯಕ್ಷರು

ಶ್ರೀ ದಿನೇಶ ಎಂ ಬಾಳಗಿ, ವಿ.ಮು. ಕಂಪ್ಯೂಟರ್‍ ಸಾಯಿನ್ಸ ವಿಭಾಗ

ಗೌರವ ಉಪಾಧ್ಯಕ್ಷರು

ಶ್ರೀಸುಬ್ರಾಯ ಎನ್ ಹೆಗಡೆ, ವಿ.ಮು. ಸಿವಿಲ್ ವಿಭಾಗ

ಕಾರ್ಯದರ್ಶಿಗಳು

ಶ್ರೀ ಕೃಷ್ಣಮೂರ್ತಿ ಶೇಟ್, ಬೋಧಕರು, ಇ & ಸಿ ವಿಭಾಗ

ಕೋಶಾಧಿಕಾರಿ

ಶ್ರೀ ವಿಷ್ಣು ಪಿ ಶ್ಯಾನಭಾಗ ಹೆಗಡೆಕರ

ಗೌರವ ಕೋಶಾಧಿಕಾರಿ

ಶ್ರೀ ದಯಾನಂದ ಜೆ. ಶೇಟ್, ಆ.ಶ್ರೇ.ಉ ಸಿವಿಲ್ ವಿಭಾಗ

ಕಾರ್ಯಕಾರಿ ಸಮಿತಿ ಸದಸ್ಯರು

ಶ್ರೀ ರಾಜೇಶ ಭಂಡಾರಿ,

ಶ್ರೀ ಸಂಜಯಕುಮಾರ ನಾಯ್ಕ

ಶ್ರೀ ವಿಕ್ರಮ ಜಿ.ಎ.

ಶ್ರೀ ಕೃಷ್ಣಾನಂದ ಭಟ್ಟ

ಶ್ರೀ ಮೋಹನ ಶ್ಯಾನಭಾಗ

ಶ್ರೀಮತಿ ಶ್ವೇತಾ ಭಟ್ಟ

 

ಸಂಘದ ಧ್ಯೇಯೋದ್ಧೇಶಗಳು :

1)    ಸಂಸ್ಥೆಯ ಹಳೇ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಹಳೇ ವಿದ್ಯಾರ್ಥಿ ಸಂಘದಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಲು ಪ್ರೇರೇಪಿಸುವುದು.

2)    ಹಳೇ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಪುರಸ್ಕರಿಸುವುದು.

3)    ಹಾಲೀ ವ್ಯಾಸಂಗ ಮಾಡುತ್ತಿರುವ ಅರ್ಹ ಬಡ ವಿದ್ಯಾರ್ಥಿಗಳಿಗೆ ಸಂಘದ  ವತಿಯಿಂದ ನೆರವು ನೀಡುವುದು

4)    ಎಲ್ಲ ಸದಸ್ಯರುಗಳ ನೆರವನ್ನು ಪಡೆದು ಅವರ ಸಹಕಾರದಿಂದ ಸಂಘವನ್ನು ಬೆಳೆಸುವುದು

5)    ಸಂಘದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಅನುಕೂಲವಾಗುವಂತೆ ಬೇರೆ ಬೇರೆ ಸ್ಥಳಗಳಲ್ಲಿ ಚಾಪ್ಟರ್‍ನ್ನು ಸ್ಥಾಪಿಸುವುದು.

6)    ಹಳೇ ವಿದ್ಯಾರ್ಥಿಗಳ ಮುಖಾಂತರ ಹಾಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡುವುದು.

7)    ಸಂಘದ ಸದಸ್ಯರುಗಳಲ್ಲಿ ಉನ್ನತ ಹುದ್ದೆ ಪಡೆದವರನ್ನು ಸಂಸ್ಥೆಗೆ ಕರೆಯಿಸಿ ವಿದ್ಯಾರ್ಥಿಗಳಿಗೆ  ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳುವುದು.

ಹಾಲೀ ಈ ಹಳೇ ವಿದ್ಯಾರ್ಥಿ ಸಂಘಕ್ಕೆ 835 ಸದಸ್ಯರುಗಳು  ಹೆಸರನ್ನು ನೊಂದಾಯಿಸಿಕೊಂಡಿದ್ದು ಸಂಸ್ಥೆಯ ಅಭಿವೃದ್ಧಿಗೆ ಆರ್ಥಿಕ ಸಹಾಯ ಸಹಕಾರ ಮಾಡುತ್ತಿದ್ದಾರೆ.

            ಗೋವಾ ರಾಜ್ಯ ವ್ಯಾಪ್ತಿಯಲ್ಲಿರುವ ಸಂಸ್ಥೆಯ ಹಳೇ ವಿದ್ಯಾರ್ಥಿಗಳು ನಮ್ಮನ್ನು ಸಂಪರ್ಕಿಸಿದ್ದು 17-04-2016 ರಂದು  ಗೋವಾ ಹಳೇ ವಿದ್ಯಾರ್ಥಿಗಳ “ಪುನರ್‍ಮಿಲನ” ಕಾರ್ಯಕ್ರಮವನ್ನು ಮಡಗಾಂವದಲ್ಲಿ ಎರ್ಪಡಿಸಲಾಗಿತ್ತು. 115 ಹಳೇ ವಿದ್ಯಾರ್ಥಿಗಳು, ಸಂಸ್ಥೆಯ ಮಾಜಿ ಹಾಗೂ ಹಾಲೀ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ಎರಡು ವರ್ಷಗಳಿಗೊಮ್ಮೆ ಪುನರ್‍ಮಿಲನ ಕಾರ್ಯಕ್ರಮವನ್ನು ಏರ್ಪಡಿಸಲು ತೀರ್ಮಾನಿಸಲಾಯಿತು. ಬರುವ ದಿನಗಳಲ್ಲಿ ಸಂಸ್ಥೆಯಲ್ಲಿಯೇ ಹಳೇ ವಿದ್ಯಾರ್ಥಿಗಳನ್ನು  ಆಮಂತ್ರಿಸಿ  ವಿಶೇಷ ಕಾರ್ಯಕ್ರಮ ಎರ್ಪಡಿಸಲು ತೀರ್ಮಾನಿಸಲಾಗಿರುತ್ತದೆ.