ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ನಿಯಮಾವಳಿ ಮತ್ತು ನಿಬಂಧನೆಗಳು :
ಹಾಜರಾತಿ ಅವಶ್ಯಕತೆ : ತಾಂತ್ರಿಕ ಪರೀಕ್ಷಾ ಮಂಡಳಿಯ ನಿಯಮಾವಳಿ ಪ್ರಕಾರ ಪ್ರತಿಯೊಂದು
ಸೆಮಿಸ್ಟರ್ನಲ್ಲಿ ವಿದ್ಯಾರ್ಥಿಯು ಪರೀಕ್ಷೆಗೆ ಹಾಜರಾಗಲು ಪ್ರತಿ ವಿಷಯದಲ್ಲಿ ಕನಿಷ್ಠ 75%
ಹಾಜರಾತಿ ಅವಶ್ಯಕತೆಯಿರುತ್ತದೆ. ಪ್ರತಿ ತಿಂಗಳ ಹಾಜರಾತಿಯನ್ನು ವಿದ್ಯಾರ್ಥಿಗಳ ಪಾಲಕರಿಗೆ
ತಿಳಿಸಲಾಗುವುದು. ಪ್ರತಿ ಸೆಮಿಸ್ಟರ್ನ ಕೊನೆಗೆ ಹಾಜರಾತಿ ಕೊರತೆಯಿರುವ ವಿದ್ಯಾರ್ಥಿಗಳ ಯಾದಿಯನ್ನು
ಸಂಸ್ಥೆಯಿಂದ ಕಾರ್ಯದರ್ಶಿಗಳು ತಾಂತ್ರಿಕ ಪರೀಕ್ಷಾ ಮಂಡಳಿಗೆ ಕಳುಹಿಸಲಾಗುತ್ತದೆ.
ವಿದ್ಯಾರ್ಥಿಗಳು ಎಸೈನ್ಮೆಂಟ್ ಮತ್ತು ಎಕ್ಟಿವಿಟಿ ರಿಪೋರ್ಟಗಳನ್ನು ಆಯಾ
ವಿಷಯದ ಉಪನ್ಯಾಸಕರಿಗೆ ಸಲ್ಲಿಸಬೇಕಾಗಿರುತ್ತದೆ. ಪ್ರತಿ ಸೆಮಿಸ್ಟರ್ನಲ್ಲಿ ಪ್ರತಿ ವಿಷಯಕ್ಕೆ ಮೂರು
ಹಾಗೂ ಪ್ರತಿ ಪ್ರಾಯೊಗಿಕ ವಿಷಯದಲ್ಲಿ ಎರಡು ಆಂತರಿಕ ಗುಣಮಟ್ಟ ನಿಗದಿ ಕಿರು ಪರೀಕ್ಷೆಗಳನ್ನು
ನಡೆಸಲಾಗುವುದು. ಪ್ರತಿ ವಿದ್ಯಾರ್ಥಿಯ ನಿರಂತರ ಆಂತರಿಕ ಮೌಲ್ಯಮಾಪನವು ಕಿರು ಪರೀಕ್ಷೆಗಳಲ್ಲಿ
ಸಾಧನೆ ಹಾಗೂ ನಿಗದಿತ ಸಮಯದಲ್ಲಿ ನೀಡುವ ಎಸೈನ್ಮೆಂಟ್ ಎಕ್ಟಿವಿಟಿ ರಿಪೋಟ‍್ ಹಾಗೂ ಪ್ರಾಕ್ಟಿಕಲ್
ರೆಕಾರ್ಡ ಪುಸ್ತಕಗಳನ್ನು ಪರಿಶೀಲಿಸಿ ನೀಡಲಾಗುವುದು. ಪ್ರತಿ ತಿಂಗಳು ಹಾಜರಾತಿಯ ಜೊತೆಗೆ
ಕಿರುಪರೀಕ್ಷೆಗಳಲ್ಲಿ ವಿದ್ಯಾರ್ಥಿಯು ಪಡೆದ ಗುಣಗಳನ್ನು ಪಾಲಕರಿಗೆ ತಿಳಿಸಲಾಗುವುದು.
ಶಿಸ್ತು : ಪಾಲಿಟೆಕ್ನಿಕ್ ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯು ಪ್ರತಿ
ವಿದ್ಯಾರ್ಥಿಯಿಂದ ಒಬ್ಬ ಇಂಜನೀಯರ್ ಯೋಗ್ಯತೆಗೆ ತಕ್ಕುದಾದ ನಡೆತೆಯನ್ನು ಆಶಿಸುತ್ತದೆ.
ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ ತರಗತಿಗೆ ಹಾಜರಾಗಬೇಕಾಗುತ್ತದೆ. ಪಾಲಿಟೆಕ್ನಿಕ್ನ ಆವರಣದಲ್ಲಿ
ಮೊಬೈಲ್ ಬಳಕೆ, ತಂಬಾಕು ಚ್ಯೂಯಿಂಗ್ ಸೇವನೆಯನ್ನು ನಿಷೇಧಿಸಲಾಗಿದೆ. ರಾಗಿಂಗ್ ಪಾಲಿಟೆಕ್ನಿಕ್ನ
ಒಳಗೆ ಹಾಗೂ ಹೊರಗೆ ಸಂಪೂರ್ಣ ನಿಷೇಧಿಸಲಾಗಿದೆ.
ಪ್ರವೇಶ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿ
ಹಾಗೂ ವಿದ್ಯಾರ್ಥಿ ಪಾಲಕರಿಂದ ಜಂಟಿಯಾಗಿ ಸಂಸ್ಥೆಯ ನಿಯಮಾವಳಿಗೆ ಸಂಬಂಧಿಸಿ ಮುಚ್ಚಳಿಕೆ ಪತ್ರ
ಪಡೆಯಲಾಗುತ್ತದೆ.
ಪ್ರಾಜೆಕ್ಟಗಳು ಹಾಗೂ ಔದ್ಯೋಗಿಕ ತರಬೇತಿ :
ಪಠ್ಯಕ್ರಮದ ಅಂಗವಾಗಿ ಎಲ್ಲ ವಿದ್ಯಾರ್ಥಿಗಳು ತಮ್ಮ ಅಂತಿಮ ವರ್ಷದಲ್ಲಿ ಒಂದು ಪ್ರಾಜೆಕ್ಟನ್ನು
ಕೈಗೊಳ್ಳಬೇಕಾಗುತ್ತದೆ. ಪ್ರತಿ ವಿಭಾಗವು ವಿವಿಧ ಪ್ರಾಜೆಕ್ಟಗಳನ್ನು ಕೈಗೊಳ್ಳಲು ಅನುವು
ಮಾಡಿಕೊಡುತ್ತದೆ. ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿವಿಧ ಔದ್ಯೋಗಿಕ ಘಟಕಗಳಿಗೆ ಹಾಗೂ ಔದ್ಯೋಗಿಕ
ಯೋಜನಾ ಸ್ಥಳಗಳಿಗೆ ಭೇಟಿಯನ್ನು ಏರ್ಪಡಿಸಲಾಗುತ್ತದೆ.
ಪರೀಕ್ಷಾ ಪರಿಣಾಮ :
ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಪ್ರಗತಿಯನ್ನು ನಿರಂತರವಾಗಿ
ಗಮನಿಸುವುದರೊಂದಿಗೆ ಪರೀಕ್ಷಾ ಫಲಿತಾಂಶ ಸುಧಾರಿಸುವಲ್ಲಿ ವಿವಿಧ ಕ್ರಮಗಳನ್ನು
ಕೈಗೊಳ್ಳಲಾಗುತ್ತಿದೆ.