ರಾಷ್ಟ್ರೀಯ ಸೇವಾ ಯೋಜನೆ

ರಾಷ್ಟ್ರೀಯ ಸೇವಾ ಯೋಜನೆ : ನೂರು ಸ್ವಯ0 ಸೇವಕರ ರಾಷ್ಟ್ರೀಯ ಸೇವಾ ಯೋಜನಾ ಘಟಕವು ನಮ್ಮ ವಿದ್ಯಾಲಯದಲ್ಲಿ “ಸೇವೆಯಿ0ದ ಶಿಕ್ಷಣ” ಎ0ಬ ಧ್ಯೇಯೋದ್ದೇಶದಡಿಯಲ್ಲಿ 2001-02ನೇ ಸಾಲಿನಲ್ಲಿ ಪ್ರಾರ0ಭಗೊ0ಡಿತು. ಪ್ರತಿವರ್ಷ ವಾರ್ಷಿಕ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಅಲ್ಲದೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಶಿಬಿರಗಳನ್ನು ನಡೆಸಲಾಗುತ್ತಿದೆ.


2011-12 ಐದು ದಿನಗಳ ರಾಜ್ಯ ಮಟ್ಟದ ಅಂತರ ಇಲಾಖಾ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಾಗಾರವು ನಮ್ಮ ವಿದ್ಯಾಲಯದಲ್ಲಿ 2012 ಮಾರ್ಚ 16 ರಿ0ದ 20 ರವರೆಗೆ ಯಶಸ್ವಿಯಾಗಿ ನಡೆದಿದೆ. ಈ ಕಾರ್ಯಾಗಾರ ದಲ್ಲಿ ವ್ಯಕ್ತಿತ್ವ ವಿಕಸನದ ಕುರಿತಾಗಿ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿತ್ತು.


2013-14 ತಾಂತ್ರಿಕ ಶಿಕ್ಷಣ ಇಲಾಖೆಯ ಎರಡನೇ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ನಮ್ಮ ವಿದ್ಯಾಲಯದಲ್ಲಿ 2014 ಫೆಬ್ರವರಿ 22 ರಿಂದ ಫೆಬ್ರವರಿ 28ರವರೆಗೆ ಯಶಸ್ವಿಯಾಗಿ ಏರ್ಪಟ್ಟಿತು. ಈ ಶಿಬಿರವನ್ನು ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತುಜಿಲ್ಲಾಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಆರ್.ವಿ. ದೇಶಪಾಂಡೆಯವರು ಉದ್ಘಾಟಿಸಿದ್ದರು. ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಶ್ರೀ ಹೆಚ್.ಯು.ತಳವಾರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸ್ಥಳೀಯ ಮಾನ್ಯ ಶಾಸಕರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಶಿಬಿರದಲ್ಲಿ ಹೊರ ರಾಜ್ಯಗಳಾದ ತಮಿಳುನಾಡು, ಪಾಂಡಿಚೇರಿ, ಗುಜರಾತ ಮತ್ತು ರಾಜಸ್ಥಾನಗಳಿಂದ 37 ಹಾಗೂ ರಾಜ್ಯದ ವಿವಿಧೆಡೆಯಿಂದಒಟ್ಟು 150 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಈ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ , ಮಹಿಳಾ ಸಬಲೀಕರಣ, ಆರೋಗ್ಯ, ವಿವೇಕಾನಂದರಚಿಂತನೆ, ಪರಿಸರ ಸಂರಕ್ಷಣೆ, ರಾಷ್ಟ್ರೀಯ ಸೇವಾಯೋಜನೆಯ ಮಹತ್ವಕುರಿತಾಗಿ ತಿಳುವಳಿಕಾ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿತ್ತು. ಯುವಜಾಥಾ ಮತ್ತು ಪ್ಲಾಸ್ಟಿಕ್ ಜಾಗೃತಿಯಕುರಿತುಜಾಥಾವನ್ನು ನಡೆಸಲಾಯಿತು. ಯಾಣಕ್ಕೆಚಾರಣಕಾರ್ಯಕ್ರಮ, ಪಾಲಿಟೆಕ್ನಿಕ್ಗಳ ಮೂಲಕ ಸಮುದಾಯಅಭಿವೃಧ್ದಿಯೋಜನೆಅಡಿಯಲ್ಲಿ ಹಳದೀಪುರದಲ್ಲಿ ತಾಂತ್ರಿಕ ಸೇವೆ, ಶಿಬಿರಜ್ಯೋತಿ ಕಾರ್ಯಕ್ರಮ ಶಿಬಿರದ ವೈಶಿಷ್ಟ್ಯವಾಗಿತ್ತು. ಪ್ರತಿ ನಿತ್ಯಯೋಗಾಭ್ಯಾಸ, ಧ್ವಜಾರೋಹಣ, ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಆಕರ್ಷಕ ವಸ್ತು ಪ್ರದರ್ಶಮ ಶಿಬಿರದ ಯಶಸ್ವಿಗೆ ಕಾರಣವಾಯಿತು.

2014-15 ನೇ ಸಾಲಿನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ನಮ್ಮ ವಿದ್ಯಾಲಯದಲ್ಲಿ 2015 ಫೆಬ್ರವರಿ 27 ರಿಂದ ಮಾರ್ಚ್ 3 ರವರೆಗೆ 5 ದಿನಗಳ ರಾಜ್ಯ ಮಟ್ಟದ ಅಂತರ್ ಇಲಾಖೆಗಳ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಾಗಾರ ಯಶಸ್ವಿಯಾಗಿ ನಡೆಸಲಾಗಿತ್ತು. ಐದು ದಿನಗಳ ಈ ಶಿಬಿರದಲ್ಲಿ ರಾಜ್ಯದ ಒಟ್ಟೂ 100 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿನಿತ್ಯ ಮುಂಜಾನೆ ಧ್ವಜಾರೋಹಣ, ಯೋಗ, ಶ್ರಮದಾನ ಕಾರ್ಯಕ್ರಮಗಳು ನಡೆದವು. ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ರಾಷ್ಟ್ರೀಯ ಭಾವೈಕ್ಯತೆ, ಆರೋಗ್ಯ, ಹದಿಹರೆಯದ ಸಮಸ್ಯೆಗಳು, ವ್ಯಕ್ತಿತ್ವ ವಿಕಸನ, ಸಂವಹನ ಕಲೆ, ಪರಿಸರ ಸಂರಕ್ಷಣೆ ಕುರಿತಾಗಿ ಉಪನ್ಯಾಸಗಳನ್ನು ನುರಿತ ಉಪನ್ಯಾಸಕರುಗಳಿಂದ ಏರ್ಪಡಿಸಲಾಗಿತ್ತು.

2017-2018 ನೇ ಸಾಲಿನಲ್ಲಿ ದಕ್ಷಿಣ ವಲಯ ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ದಿನಾಂಕ 24-03-2018 ರಿಂದ 30-03-2018ರವರೆಗೆ ಕುಮಟಾ ತಾಲೂಕಿನ ಬಗ್ಗೋಣ ಗ್ರಾಮದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ರಾಜ್ಯ ಹಾಗೂ ದಕ್ಷಿಣ ವಲಯ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ತಮಿಳನಾಡು, ತೆಲಂಗಾಣ ರಾಜ್ಯಗಳಿಂದ ಶಿಬಿರಾರ್ಥಿಗಳು ಆಗಮಿಸಿ ಈ ಶಿಬಿರದ ಸಂಪೂರ್ಣ ಪ್ರಯೋಜನ ವನ್ನು ಪಡೆದುಕೊಂಡರು.