ಸೌಲಭ್ಯಗಳು
 

ಕಟ್ಟಡ ಮತ್ತು ಪ್ರಯೋಗಾಲಯ : ಉತ್ತಮ ಶಿಕ್ಷಣ ನೀಡುವಲ್ಲಿ ಪೂರಕವಾಗಿ ಕೆನರಾ ಕಾಲೇಜು ಸೊಸೈಟಿಯ ಒಟ್ಟೂ 42 ಎಕರೆ ಭೂಮಿಯನ್ನು ತನ್ನ ಅಧೀನದ ಎಲ್ಲ ಶಿಕ್ಷಣ ಸಂಸ್ಥೆಯ ಬಳಕೆಗಾಗಿ ಇಟ್ಟಿದೆ. ಇದರಲ್ಲಿ 10 ಎಕರೆ ವಿಸ್ತೀರ್ಣದ ಭೂಮಿಯನ್ನು ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ಉಪಯೋಗಕ್ಕಾಗಿ ಮೀಸಲಿರಿಸಲಾಗಿದೆ. ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮತ್ತು ಪ್ರಾಯೋಗಿಕ ತರಬೇತಿ ನೀಡುವಲ್ಲಿ ಅವಶ‍್ಯವಿರುವ ತರಗತಿಕೋಣೆ ವಿಶಾಲವಾದ ಡ್ರಾಯಿಂಗ್ ಹಾಲ್ ಹಾಗೂ ಪ್ರಯೋಗಾಲಯ/ವರ್ಕಶಾಪ್ ಗಳನ್ನು ನೀಡಿ ಮೂಲಭೂತ ಸೌಕರ್ಯ ಒದಗಿಸಿ ಅವಶ್ಯ ಸೌಲಭ್ಯ ಒದಗಿಸಿದೆ.  

ಪಠ್ಯೇತರ ಚಟುವಟಿಕೆ : ಕೆನರಾ ಕಾಲೇಜು ಸೊಸೈಟಿಯು ತನ್ನ ಅಧೀನದ ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ಸೇರಿದಂತೆ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಅನುಕೂಲವಾಗುವಂತೆ ವಿಶಾಲವಾದ ಕ್ರೀಡಾಂಗಣವನ್ನು ಹೊಂದಿರುತ್ತದೆ. ವಿ್ದ್ಯಾರ್ಥಿಗಳು ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸುವಲ್ಲಿ ಉತ್ತೇಜನ ನೀಡುವಲ್ಲಿ ಸಂಸ್ಥೆಯ ಎರಡು ಸಿಬ್ಬಂದಿಗಳಿಗೆ ಮೇಲುಸ್ತುವಾರಿ ನೀಡಲಾಗಿದೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಪ್ರತಿವರ್ಷ ಭಾಗವಹಿಸಿ ಪದಕವನ್ನು ಪಡೆಯುತ್ತಿರುವುದು ಸಂತಸದ ಸಂಗತಿ. 2018 ಫೇಬ್ರವರಿಯಲ್ಲಿ ಸಂಸ್ಥೆಯ ಕಂಪ್ಯೂಟರ್ ಸಾಯಿನ್ಸ ವಿಭಾಗದ ಕುಮಾರ ಸಂದೇಶ ನಾಯ್ಕ ಈತನು ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ದಕ್ಷಿಣವಲಯದ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಈಟಿ ಎಸೆತದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ.  

ಸಂಸ್ಥೆಯ ವಿದ್ಯಾರ್ಥಿಗಳು ಬೇರೆ ಸಂಸ್ಥೆಗಳಲ್ಲಿ ನಡೆಯುವ ಸೆಮಿನಾರ್ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ.  

ಗೃಂಥಾಲಯ ಮತ್ತು ವಾಚನಾಲಯ : ಗೃಂಥಾಲಯದಲ್ಲಿ ಅತ್ಯಂತ ಮೌಲ್ಯದ ಹಾಗೂ ಪ್ರಯೋಜನಕಾರಿ ತಾಂತ್ರಿಕ ಪುಸ್ತಕಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವಲ್ಲಿ ಪೂರಕವಾಗಿ 10000 ಕ್ಕೂ ಮೇಲ್ಪಟ್ಟು ಪುಸ್ತಕಗಳನ್ನು 09 ದಿನಪತ್ರಿಕೆಗಳು 15 ಮ್ಯಾಗೆಝಿನ್ಗಳನ್ನು ಅಳವಡಿಸಲಾಗಿದೆ. ಪ್ರತಿ ವಿದ್ಯಾರ್ಥಿಗೆ ಒಮ್ಮೆ ಎರಡು ಪುಸ್ತಕಗಳನ್ನು ನೀಡಲಾಗುತ್ತಿದೆ. ಪ್ರತಿಭಾವಂತ ಬಡ ವಿದ್ಯರ್ಥಿಗಳಿಗೆ ಗೃಂಥಾಲಯದಿಂದ ಹೆಚ್ಚುವರಿ ಪುಸ್ತಕಗಳನ್ನು ನೀಡಲಾಗುತ್ತಿದೆ.  

ಉಪಹಾರ ಗೃಹ : ಕೆನರಾ ಕಾಲೇಜು ಸೊಸೈಟಿಯು ತನ್ನ ಅಧೀನದ ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ಸೇರಿದಂತೆ ಎಲ್ಲ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಆವರಣದ ಮಧ್ಯಭಾಗದಲ್ಲಿ ಸುವ್ಯವಸ್ಥಿತ ಕ್ಯಾಂಟೀನ್ ಇಟ್ಟು ಶುಚಿ-ರುಚಿಯಾದ ತಿಂಡಿ ತಿನಿಸು ಮತ್ತು ಊಟ ಉಪಹಾರವನ್ನು ಕಡಿಮೆ ಬೆಲೆಯಲ್ಲಿ ಸಿಗುವಂತೆ ವ್ಯವಸ್ಥೆ ಕಲ್ಪಸಿದೆ.  

ವಿದ್ಯಾರ್ಥಿ ತರಬೇತಿ ಮತ್ತು ಪ್ಲೇಸ್ಮೆಂಟ್ ಸೌಲಭ್ಯ : ಅಂತಿಮ ವರ್ಷದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉದ್ಯೋಗ ಮತ್ತು ತರಬೇತಿ ವಿಭಾಗವನ್ನು ಸಂಸ್ಥೆಯಲ್ಲಿ ಪ್ರಾರಂಭಿಸಲಾಗಿದೆ. ಓರ್ವ ಆಯ್ಕೆ ಶ್ರೇಣಿ ಉಪನ್ಯಾಸಕರನ್ನು ಈ ವಿಭಾಗದ ಉಸ್ತುವಾರಿಗೆ ನಿಯೋಜಿಸಿ ಮಾರ್ಗದರ್ಶನ ನೀಡಲಾಗುತ್ತಿದೆ. ಪ್ರತಿಷ್ಠಿತ ಕಂಪನಿಯಾದ ಜೆ.ಎಸ್.ಡಬ್ಲೂ ಸ್ಟೀಲ್ ಲಿ. ತೋರಣಗಲ್ಲು ಇವರು 2006-2007 ಸಾಲಿನಿಂದ ಸಂಸ್ಥೆಯಲ್ಲಿ ನಿರಂತರವಾಗಿ ಕ್ಯಾಂಪಸ್ ಸಂದರ್ಶನ ನಡೆಸುತ್ತಿದ್ದಾರೆ.  

ಇವರನ್ನು ಹೊರತುಪಡಿಸಿ ಈ ಕೆಳಗಿನ ಪ್ರತಿಷ್ಠಿತ ಕಂಪನಿಗಳು ಈ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ ನಡೆಸುತ್ತಿದ್ದಾರೆ.
 1.  ಬಜಾಜ್ ಅಟೋ ಲಿ. ಪುಣೆ.
 2.  ಟಾಟಾ ಮೋಟಾರ್ಸ ಧಾರವಾಡ
 3.  ಸ್ಪೈಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜೋಡಳ್ಳಿ,ಕಲಘಟಗಿ
 4. ಸೆಂಟಮ್ ಇಲೆಕ್ಟ್ರಾನಿಕ್ಸ ಲಿಮಿಟೆಡ್ ಬೆಂಗಳೂರು.
 5. ಸ್ಕಾನಿಯ ಮೋಟಾರ್ಸ ನರ್ಸಾಪುರ ಕೋಲಾರ ಜಿಲ್ಲೆ.
 6.  ಟ್ರಾಕ್ಟರ್ ಎಂಡ್ ಫಾರ್ಮ ಇಕ್ವಿಪ್ಮೆಂಟ್ಸ ಲಿಮಿಟೆಡ್, ದೊಡ್ಡಬಳ್ಳಾಪುರ
 7.  ಟೆಕ್ ಮಹೇಂದ್ರ ಬೆಂಗಳೂರು.
ನಮ್ಮ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರೆಯುವ ನಿಟ್ಟಿನಲ್ಲಿ ಸಮೀಪದ ಪಾಲಿಟೆಕ್ನಿಕ್ಗಳಿಗೆ ಕೂಡ ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಲು ಕಳುಹಿಸುತ್ತಿದ್ದೇವೆ.  

ಉನ್ನತ ಶಿಕ್ಷಣ ಮತ್ತು ಹೆಚ್ಚಿನ ವ್ಯಾಸಂಗ : ಸಂಸ್ಥೆಯಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಬಿ. ಇ ಉನ್ನತ ವ್ಯಾಸಂಗಕ್ಕಾಗಿ ನಡೆಯುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ರಾಂಕ್ನೊಂದಿಗೆ ಕರ್ನಾಟಕದ ಪ್ರತಿಷ್ಠಿತ ಕಾಲೇಜುಗಳಲ್ಲಿ ಬಿ.ಇ. ಮೂರನೇ ಸೆಮಿಸ್ಟರ್ಗೆ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಕೆಳಗೆ ನಮೂದಿಸಿದ ಇಂಜನೀಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವುದು ಹೆಮ್ಮೆಯ ಹಾಗೂ ಶ್ಲಾಘನೀಯ ವಿಷಯವಾಗಿದೆ.
 1.  ಎಂ.ಎಸ್. ರಾಮಯ್ಯ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ. ಬೆಂಗಳೂರು
 2.  ಆರ್.ವಿ.ಕಾಲೇಜ್ ಆಫ್ ಇಂಜನೀಯರಿಂಗ್, ಬೆಂಗಳೂರು
 3.  ಪಿಇಎಸ್ ಯುನಿರ್ವಸಿಟಿ, ಬೆಂಗಳೂರು.
 4.  ಯುವಿಸಿಇ ಬೆಂಗಳೂರು.
 5.  ಎನ್.ಐ.ಇ ಮೈಸೂರು.
 6.  ಎನ್ಎಂಎಎಮ್ ಇನ್ಸ್ಟೀಟ್ಯೂಟ್ ಆಪ್ ಟೆಕ್ನಾಲಜಿ, ನಿಟ್ಟೆ
 7.  ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬೆಂಗಳೂರು
 8.  ಸೆಂಟ್ ಜೊಸೆಫ್ ಇಂಜನೀಯರಿಂಗ್ ಕಾಲೇಜು ಮಂಗಳೂರು.
 9.  ಅಂಜುಮಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮೆನೇಜಮೆಂಟ್, ಭಟ್ಕಳ
 10.  ಜೆ.ಎಸ್.ಎಸ್. ಅಕಾಡಮಿ ಆಪ್ ಟೆಕ್ನಿಕಲ್ ಎಜ್ಯುಕೇಶನ್ ಬೆಂಗಳೂರು.
 11.  ಎನ್ಐಇ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೈಸೂರು
2018-2019ನೇ ಸಾಲಿಗೆ ಸಂಸ್ಥೆಯ ಇಲೆಕ್ಟ್ರಾನಿಕ್ಸ ವಿಭಾಗದಲ್ಲಿ ವ್ಯಾಸಂಗ ಮಾಡಿದ ಕುಮಾರ ಸಂದೇಶ ಶೆಟ್ಟಿ ಈತನು ಸಿ.ಇ.ಟಿ. ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ.