ನಮ್ಮ ಸಂಸ್ಥೆಯ ಆಡಳಿತ ಮಂಡಳಿಯವರ ಪ್ರಾಮಾಣಿಕ ಪ್ರಯತ್ನ ಮತ್ತು ಪಾಲಕರ ಬೇಡಿಕೆಯಿಂದಾಗಿ ಈ ಮೆಕ್ಯಾನಿಕಲ್
ವಿಭಾಗವು 1985 ರಲ್ಲಿ ಪ್ರಾರಂಭಗೊಂಡು ವಾಣಿಜ್ಯೋದ್ಯಮದ ಅಗತ್ಯಗಳಿಗೆ ಸರಿಹೊಂದುವಂತೆ ವಿದ್ಯಾರ್ಥಿಗಳಿಗೆ
ಕಾಲಕಾಲಕ್ಕೆ ಬದಲಾದ ತಂತ್ರಜ್ಞಾನ ಒದಗಿಸುವ ಮೂಲಕ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು
ಒದಗಿಸುತ್ತದೆ.
ನಮ್ಮಲ್ಲಿ ಸಹಭಾಗಿತ್ವ, ಸಂವಹನ ಮತ್ತು ನೈಜ ಜಗತ್ತಿನ ಯೋಜನೆಗೆ ಸಹಾಯದಿಂದ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು
ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವದರೊಂದಿಗೆ ಉತ್ಕೃಷ್ಟತೆಯನ್ನು ಸಾಧಿಸುವ ಸೃಜನಶೀಲ ಮತ್ತು ನೈತಿಕ
ತಂತ್ರಜ್ಞರನ್ನು ತಯಾರು ಮಾಡಲಾಗುತ್ತಿದೆ.
ಗುಣಮಟ್ಟದ ಶೈಕ್ಷಣಿಕ ಸವಲತ್ತುಗಳೊಂದಿಗೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನೈತಿಕ ಮೌಲ್ಯಗಳನ್ನು ಮತ್ತು ನಾಯಕತ್ವದ
ಸಾಮರ್ಥ್ಯಗಳನ್ನು ರೂಪಿಸಲಾಗುತ್ತಿದೆ.
ವಿದ್ಯಾರ್ಥಿಗಳು ಪಾಠ ಪ್ರವಚನಗಳ ಜೊತೆ ಪ್ರಾಯೋಗಿಕವಾಗಿ ವಿವಿಧ ಯಂತ್ರೋಪಕರಣಗಳನ್ನು ಉಪಯೋಗಿಸುವ ಕೌಶಲ್ಯಗಳನ್ನು
ಕಲಿಸಿಕೊಡಲಾಗುತ್ತಿದೆ
ಆಧುನಿಕ ತಂತ್ರಜ್ಞಾನದ ಮಾಹಿತಿಗಾಗಿ ನುರಿತ ಕೈಗಾರಿಕಾ ತರಬೇತುದಾರರಿಂದ ಪ್ರಾತ್ಯಕ್ಷತೆ ನಡೆಸಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಮಾಹಿತಿಗಾಗಿ ಹಾಗೂ ತರಬೇತಿಗಾಗಿ ವಿವಿಧ ಉತ್ಪಾದನಾ ಘಟಕಗಳಲ್ಲಿ ದುಡಿಯುವ ವ್ಯವಸ್ಥೆ
ಮಾಡಿಕೊಡಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ತಾಂತ್ರಿಕ ವಸ್ತುಪ್ರದರ್ಶನ, ಹೊಸ ಅವಿಷ್ಕಾರಕ್ಕೆ ಅಗತ್ಯ ನೆರವಿನ ಜೊತೆಗೆ ಉದ್ಯೊಗ
ಪಡೆಯುವಲ್ಲಿ ಅಗತ್ಯ ನೆರವು ನೀಡಲಾಗುತ್ತಿದೆ.
ಇತ್ತೀಚಿನವರೆಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದಿದ್ದು ಪ್ರತಿಭಾವಂತ
ಅನೇಕರು ಉನ್ನತ ವ್ಯಾಸಂಗ ಮಾಡಿ ಉತ್ತಮ ಜೀವನ ನಡೆಸುತ್ತಿದ್ದಾರೆ.
ಮೆಕ್ಯಾನಿಕಲ್ ವಿಭಾಗಕ್ಕೆ ಪ್ರವೇಶ ಪಡೆಯಲು ಪೈಪೋಟಿ ಇದ್ದು ಪ್ರತಿ ವರ್ಷ 60 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ
ನೀಡಲಾಗುತ್ತಿದೆ. ವಿಭಾಗವು 2009 ರಲ್ಲಿ ಸರಕಾರದ ಅನುದಾನಕ್ಕೆ ಒಳಪಟ್ಟಿದ್ದು ವಿಭಾಗದಲ್ಲಿ ನುರಿತ ಉಪನ್ಯಾಸಕರು
ಹಾಗೂ ಮೆಕ್ಯಾನಿಕ್‍ಗಳು ಸೇವೆ ಸಲ್ಲಿಸುತ್ತಿದ್ದಾರೆ.