ಇಲೆಕ್ಟ್ರಾನಿಕ್ಸ ಮತ್ತು ಕಮ್ಯುನಿಕೇಶನ್ ಇಂಜನಿಯರಿಂಗ್ ವಿಭಾಗ :

ಇಲೆಕ್ಟ್ರಾನಿಕ್ಸ ಮತ್ತು ಕಮ್ಯುನಿಕೇಶನ್ ಇಂಜನೀಯರಿಂಗ್ ವಿಭಾಗವನ್ನು 1985 ರಲ್ಲಿ ಆರಂಭಿಸಲಾಯಿತು. ಪ್ರಸ್ತುತ ಈ ವಿಭಾಗಕ್ಕೆ ಮಂಜೂರಾದ ವಿದ್ಯಾರ್ಥಿ‍ಗಳ ಸಂಖ್ಯೆ 60 ಆಗಿರುತ್ತದೆ. ಇಲೆಕ್ಟ್ರಾನಿಕ್ಸ ಮತ್ತು ಕಮ್ಯುನಿಕೇಶನ್ ಇಂಜನೀಯರಿಂಗ್ ಕ್ಷೇತ್ರದ ಮೂಲಭೂತ ವಿಷಯಗಳಲ್ಲಿ ಡಿಪ್ಲೋಮಾ ಆಕಾಂಕ್ಷಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವುದು ಈ  ವಿಭಾಗದ ಮುಖ್ಯ ಉದ್ದೇಶವಾಗಿರುತ್ತದೆ.

ಈ ವಿಭಾಗದಲ್ಲಿ ಒಟ್ಟೂ ಆರು ಬೋಧಕ ಮತ್ತು ಆರು ಭೋಧಕೇತರ ನುರಿತ ಸಿಬ್ಬಂದಿ ವರ್ಗದವರಿದ್ದು ಇಬ್ಬರು ಸ್ನಾತಕೋತ್ತರ ಪದವಿ ಹೊಂದಿದವರಾಗಿರುತ್ತಾರೆ. ಎಲ್ಲಾ ಸಿಬ್ಬಂದಿ ವರ್ಗದವರು ಬೋಧನೆಯಲ್ಲಿ ಅತ್ಯುತ್ತಮ ಅನುಭವ ಹೊಂದಿದವರಾಗಿರುತ್ತಾರೆ. ವಿಭಾಗವು ಹೊಸ ಬದಲಾದ ಪಠ್ಯಕ್ರಮದ ಅನ್ವಯ ಶಿಕ್ಷಣ ನೀಡಲು ಅಗತ್ಯವಿರುವ ಮೂಲ ಸೌಕರ್ಯ ಹಾಗೂ ಅತ್ಯಾಧುನಿಕ ಸೌಲಭ್ಯ ಹಾಗೂ ತಂತ್ರಾಂಶವುಳ್ಳ ಉಪಕರಣವನ್ನು ಹೊಂದಿರುತ್ತದೆ.  ವಿಭಾಗವು ಪ್ರತ್ಯೇಕವಾಗಿ ಎನಲಾಗ್ ಲ್ಯಾಬ್, ಡಿಜಿಟಲ್ ಲ್ಯಾಬ್ ಹಾಗೂ ಗಣಕಯಂತ್ರ ಪ್ರಯೋಗಾಲಯವನ್ನು ಹೊಂದಿರುತ್ತದೆ. ವಿಭಾಗದ ವತಿಯಿಂದ ಅಂತಿಮ  ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳ ಸೌಲಭ್ಯವನ್ನು ಕಲ್ಪಸಲಾಗುತ್ತದೆ. ಪ್ರತಿ ಸೆಮಿಸ್ಟರ್‍ನಲ್ಲಿ ವಿವಿಧ ತಾಂತ್ರಿಕ ವಿಷಯಗಳ ಬಗ್ಗೆ ತಜ್ಞರಿಂದ ಉಪನ್ಯಾಸ/ಕಾರ್ಯಾಗಾರ  ವನ್ನು ಏರ್ಪಡಿಸಲಾಗುವುದು. ಹಾಗೂ ವಿವಿಧ ಸಂಸ್ಥೆಗಳಲ್ಲಿ ಔದ್ಯೋಗಿಕ ತರಬೇತಿಯನ್ನು ನೀಡಲಾಗುವುದು.

2017-18 ನೇ ಸಾಲಿನ ನಮ್ಮ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಕುಮಾರ  ಸಂದೇಶ ಶೆಟ್ಟಿ ಇವರು ಹುಬ್ಬಳ್ಳಿ ದೇಶಪಾಂಡ ಪೌಂಡೇಶನ್ ನ ಐ ಕ್ರೀಯೇಟ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಹಾಗೂ ರಾಷ್ಟಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವುದು ವಿಭಾಗದ ಸಾಧನೆಯ ಕೀರಿಟಕ್ಕೆ ಹೆಮ್ಮೆಯ ಗರಿಯಾಗಿರುತ್ತದ.