ಕಂಪ್ಯೂಟರ್ ಸಾಯಿನ್ಸ ಮತ್ತು ಇಂಜನೀಯರಿಂಗ್ ವಿಭಾಗವನ್ನು 1989 ರಲ್ಲಿ ಆರಂಭಿಸಲಾಯಿತು. ಪ್ರಸ್ತುತ ಈ
ವಿಭಾಗಕ್ಕೆ ಮಂಜೂರಾದ ವಿದ್ಯಾರ್ಥಿಗಳ ಸಂಖ್ಯೆ 60 ಆಗಿರುತ್ತದೆ. ಕಂಪ್ಯೂಟರ್ ಸಾಯಿನ್ಸ ಮತ್ತು ಇಂಜನೀಯರಿಂಗ್
ವಿಭಾಗವು ಯಂತ್ರಾಂಶ (ಹಾರ್ಡವೇರ) ಹಾಗೂ ತಂತ್ರಾಂಶ (ಸಾಪ್ಟವೇ್ರ್) ಗಳ ಬಗ್ಗೆ ಶಿಕ್ಷಣ ನೀಡುವುದು
ಈ ವಿಭಾಗದ ಮುಖ್ಯ ಉದ್ದೇಶವಾಗಿರುತ್ತದೆ.
ಈ ವಿಭಾಗದಲ್ಲಿ ಒಟ್ಟೂ ನಾಲ್ಕು ಬೋಧಕ ಮತ್ತು ಒಂದು ಭೋಧಕೇತರ ನುರಿತ ಸಿಬ್ಬಂದಿ ವರ್ಗದವರು
ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ಸಿಬ್ಬಂದಿ ವರ್ಗದವರು ಬೋಧನೆಯಲ್ಲಿ ಅತ್ಯುತ್ತಮ ಅನುಭವ
ಹೊಂದಿದವರಾಗಿರುತ್ತಾರೆ. ವಿಭಾಗವು ಹೊಸ ಬದಲಾದ ಪಠ್ಯಕ್ರಮದ ಅನ್ವಯ ಶಿಕ್ಷಣ ನೀಡಲು ಅಗತ್ಯವಿರುವ ಮೂಲ ಸೌಕರ್ಯ
ಹಾಗೂ ಇತ್ತೀಚಿನ ಹೊಸ ತಂತ್ರಾಂಶವುಳ್ಳ ಕಂಪ್ಯೂಟರ್ ಗಳನ್ನು ಹೊಂದಿರುತ್ತದೆ. ವಿಭಾಗವು ಮೂರು
ಪ್ರತ್ಯೇಕ ಕಂಪ್ಯೂಟರ್ ಪ್ರಯೋಗಾಲಯಗಳನ್ನು ಹೊಂದಿರುತ್ತದೆ. ಪ್ರತಿ ಸೆಮಿಸ್ಟರ್‍ನಲ್ಲಿ ವಿವಿಧ ತಾಂತ್ರಿಕ
ವಿಷಯಗಳ ಬಗ್ಗೆ ತಜ್ಞರಿಂದ ಉಪನ್ಯಾಸ/ಕಾರ್ಯಾಗಾರ ವನ್ನು ಏರ್ಪಡಿಸಲಾಗುತ್ತಿದೆ. ಹಾಗೂ ವಿವಿಧ
ಸಂಸ್ಥೆಗಳಲ್ಲಿ ಔದ್ಯೋಗಿಕ ತರಬೇತಿಯನ್ನು ನೀಡಲಾಗುತ್ತಿದೆ. ವಿಭಾಗದಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡಿದ
ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಬಿ.ಇ ವ್ಯಾಸಂಗಕ್ಕಾಗಿ ಸಿ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಉನ್ನತ
ಕ್ರಮಾಂಕ ಪಡೆದು ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುತ್ತಾರೆ.