ಸನ್ 1985 ರಂದು ಶ್ರೀ
ವಿದ್ಯಾಧಿರಾಜ ತಾಂತ್ರಿಕ ವಿದ್ಯಾಲಯದಲ್ಲಿ ಸಿವಿಲ್ ಇಂಜನೀಯರಿಂಗ್ ವಿಭಾಗವು
ಪ್ರಾರಂಭವಾಗಿರುತ್ತದೆ. ನಿರಂತರವಾಗಿ ಪರಿಣಾಮಕಾರಿ ಬೋಧನಾ ಕಲಿಕಾ ವಾತಾವರಣವನ್ನು ಹೊಂದಿದ್ದು
ಪ್ರಥಮ ವರ್ಷಕ್ಕೆ 45 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. 2009 ರಲ್ಲಿ ಸಿವಿಲ್
ಇಂಜನೀಯರಿಂಗ್ ವಿಭಾಗವು ಸರಕಾರದ ವೇತನಾನುದಾನ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ವಿಭಾಗವು 14
ನುರಿತ ಅನುಭವಿ ಬೋಧಕ ಬೋಧಕೇತರ ಸಿಬ್ಬಂದಿಗಳನ್ನು ಒಳಗೊಂಡಿರುತ್ತದೆ.
ಸಿವಿಲ್ ಇಂಜನೀಯರಿಂಗ್ ವಿಭಾಗವು
ಸುಸಜ್ಜಿತ ಪ್ರಯೋಗಾಲಯವನ್ನು ಹೊಂದಿದ್ದು ಹೊಸ ಪಠ್ಯ ಕ್ರಮದಂತೆ ವ್ಯವಸ್ಥಿತವಾಗಿ ಪಾಠೋಪಕರಣ
ಮತ್ತು ಪೀಠೋಪಕರಣಗಳನ್ನು ಅಳವಡಿಸಲಾಗಿದೆ. ಸಿವಿಲ್ ಇಂಜನೀಯರಿಂಗ್ ವಿಭಾಗವು ಪ್ರಸ್ತುತ
ತಂತ್ರಜ್ಞಾನಕ್ಕೆ ತೆರೆದುಕೊಂಡಿದ್ದು,ಈ ವಿಭಾಗದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ
ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಾ ಇದ್ದಾರೆ. ಸಿವಿಲ್ ವಿಭಾಗದಲ್ಲಿ ತಂತ್ರಜ್ಞಾನಕ್ಕೆ
ಸಂಬಂಧಪಟ್ಟಂತಹ ಕಟ್ಟಡ ಕಾಮಗಾರಿ ವಸ್ತುಗಳ ಗುಣಮಟ್ಟವನ್ನು ಕೂಡಾ ಪರೀಕ್ಷೆ ಮಾಡಲಾಗುತ್ತಿದೆ.