ಅಟೊಮೋಬೈಲ್ ಇಂಜನೀಯರಿಂಗ್ ವಿಭಾಗವನ್ನು 1992 ರಲ್ಲಿ ಪ್ರಾರಂಭಿಸಲಾಯಿತು ವಾಹನ ಹಾಗೂ ಯಂತ್ರೋಪಕರಣಗಳಿಗೆ
ಸಂಬಂಧಿಸಿ ವಿಶೇಷ ಜ್ಞಾನಪಡೆದು ಈ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವಲ್ಲಿ ಅನುಕೂಲವಾಗುವ ಉದ್ದೇಶದೊಂದಿಗೆ ಈ
ಕೋರ್ಸನ್ನು ಪ್ರಾರಂಭಿಸಲಾಯಿತು. ಈ ವಿಭಾಗಕ್ಕೆ ಮಂಜೂರಾದ ವಿದ್ಯಾರ್ಥಿಗಳ ಸಂಖ್ಯೆ 30 ಇರುತ್ತದೆ. ಈ ವಿಭಾಗದಲ್ಲಿ
ನುರಿತ ಒಟ್ಟೂ 03 ಬೋಧಕ ಸಿಬ್ಬಂದಿ ಹಾಗೂ 03 ಬೋಧಕೇತರ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ
ವಿಭಾಗದಲ್ಲಿ ಮಶಿನ್ ಶಾಪ್, ವಾಹನ ಚೆಸ್ ಹಾಗೂ ಬಿಡಬಾಗಗಳ ಲ್ಯಾಬ್, ಅಟೊಮೋಬೈಲ್ ವರ್ಕಶಾಪ್,
ಕಂಪ್ಯೂಟರ್ ಲ್ಯಾಬ್‍ಗಳು ಪ್ರತ್ಯೇಕವಾಗಿರುತ್ತವೆ. ಈ ವಿಭಾಗದ ಅಂತಿಮ ಸೆಮಿಸ್ಟರ್‍ನಲ್ಲಿ ವ್ಯಾಸಂಗ
ಮಾಡುವಂತ ವಿದ್ಯಾರ್ಥಿಗಳು ಇನ್‍ಪ್ಲಂಟ್ ತರಬೇತಿ ಮತ್ತು ವಾಹನ ಚಾಲನೆ ತರಬೇತಿಯನ್ನು
ನೀಡಲಾಗುತ್ತಿದ್ದು ವಾಹನ ಉತ್ಪಾದನಾ ಹಾಗೂ ರಿಪೇರಿ ಔದ್ಯೋಗಿಕ ಘಟಕಗಳಿಗೆ ಭೇಟಿ ನೀಡಿ ವಿಶೇಷ ಜ್ಞಾನ ಹಾಗೂ
ಅನುಭವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ವಿಭಾಗದ ಹೆಚ್ಚಿನ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಹಾಗೂ ಹತ್ತಿರದ
ಪಾಲಿಟೆಕ್ನಿಕ್‍ನಲ್ಲಿ ನಡೆಯುವ ಕ್ಯಾಂಪಸ್ ಸಂದರ್ಶನದಲ್ಲಿ ಹಾಜರಾಗಿ ಆಯ್ಕೆಗೊಂಡಿರುವುದು ಹೆಮ್ಮೆಯ ವಿಷಯ.
ವಿದ್ಯಾರ್ಥಿಗಳಿಗೆ ನುರಿತ ಸಂಪನ್ಮೂಲವ್ಯಕ್ತಿಗಳಿಂದ ಪಠ್ಯಕ್ರಮಕ್ಕೆ ಪೂರಕವಾದ ವಿಷಯದ ಕುರಿತು ವಿಶೇಷ
ಉಪನ್ಯಾಸ ಹಾಗೂ ಮಾರ್ಗದರ್ಶನ ನೀಡುಲಾಗುತ್ತಿದೆ.