“ಪಾಲಿಟೆಕ್ನಿಕ್‍ಗಳ ಮೂಲಕ ಸಮುದಾಯ ಅಭಿವೃದ್ಧಿ” ಯೋಜನೆ
ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಪ್ರಾಯೋಜಿತ “ಸಮುದಾಯ ಪಾಲಿಟೆಕ್ನಿಕ್”
ಯೋಜನೆಯನ್ನು ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ನಲ್ಲಿ 1998ರಿಂದ 2007ರವರೆಗೆ 9 ವರ್ಷಗಳ ಕಾಲ
ಯಶಸ್ವಿಯಾಗಿ ನಡೆಸಲಾಗಿದೆ..
ಕೇಂದ್ರ ಸರಕಾರವು 2009-2010ರಿಂದ “ಪಾಲಿಟೆಕ್ನಿಕ್‍ಗಳ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ ”
ಎಂಬ ಹೆಸರಿನ ಅಡಿಯಲ್ಲಿ ಕೆಲವು ಬದಲಾವಣೆಗಳೊಂದಿಗೆ ಬಂದ ಈ ಯೋಜನೆಯನ್ನು ನಮ್ಮ ಸಂಸ್ಥೆಯಲ್ಲಿ
ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯ ಮೂಲ ಉದ್ದೇಶ ತಂತ್ರಜ್ಞಾನದ ಮೂಲಕ ಸಮುದಾದಯ ಅಭಿವೃದ್ಧಿ
ಮತ್ತು ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟವನ್ನು ಉತ್ತಮ ಪಡಿಸಲು ವಿವಿಧ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವುದು.
· ಗ್ರಾಮಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಗ್ರಾಮೀಣ ಜನರ ಸಮೀಕ್ಷೆ ನಡೆಸುವುದು. ಹಾಗೂ ಯೋಜನೆಯ
ರೂಪರೇಷೆಗಳನ್ನು ಸಿದ್ಧಗೊಳಿಸುವುದು.
· ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ತರಬೇತಿ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ತರಬೇತಿ ನೀಡಿ
ಸ್ವಾವಲಂಬಿಗಳಾಗಲು ನೆರವಾಗುವುದು.
· ತಾಂತ್ರಿಕ ಸೇವೆಗಳ ಮೂಲಕ ಗ್ರಾಮೀಣ ಜನರಿಗೆ ಉಚಿತವಾಗಿ ಕೃಷಿ ಉಪಕರಣ ಮತ್ತು ಗೃಹ ಬಳಕೆ ವಿದ್ಯುತ್ ಉಪಕರಣಗಳ
ದುರಸ್ತಿ ಮಾಡಿ ಕೊಡುವುದು.
· ತಂತ್ರಜ್ಞಾನ ವರ್ಗಾವಣೆಯ ಮೂಲಕ ಗ್ರಾಮೀಣ ಜನರಿಗೆ ವಿವಿಧ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸುವುದು
· ವಿವಿಧ ಸಂಘ-ಸಂಸ್ಥೆಗಳ ನೆರವಿನಿಂದ ಉಚಿತ ಆರೋಗ್ಯ ಶಿಬಿರ, ಉದ್ಯಮ ಶೀಲತೆ ಮುಂತಾದ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವುದು.
· ವಿವಿಧ ನೈಪುಣ್ಯತೆಯ ಬಗ್ಗೆ ವಿಚಾರ ಸಂಕಿರಣ, ಉಪನ್ಯಾಸ, ಕರಪತ್ರ ಹಂಚುವುದು ಹಾಗೂ ವಿಡಿಯೋ ಚಿತ್ರಣದ ಮುಖಾಂತರ
ಗ್ರಾಮೀಣ ಜನರಿಗೆ ಮಾಹಿತಿ ನೀಡುವುದರ ಮೂಲಕ ತಿಳುವಳಿಕೆ ಮೂಡಿಸುವುದು.
ಸೂಕ್ತ ತಂತ್ರಜ್ಞಾನ ಬದಲಾವಣೆ ಅಡಿಯಲ್ಲಿ ಪೆಡಲ್ ಆಪರೇಟಡ್ ಪಂಪ್, ಪೆಡಲ್ ಆಪರೇಟಡ್ ಮಿಕ್ಸಿ, ತೆಂಗಿನ ಮರ
ಹತ್ತುವ ಸಾಧನ, ಅಡಿಕೆ ಸಿಪ್ಪೆ ತೆಗೆಯುವ ಯಂತ್ರ, ಮೋಟಾರು ಸೈಕಲ್‍ಗೆ ಅಳವಡಿಸಿದ ಟ್ರಾಲಿ, ಆಹಾರ ಘನ
ತ್ಯಾಜ್ಯದಿಂದ ಬಯೋ ಗ್ಯಾಸ್ ಉತ್ಪದಕಾ ಘಟಕ, ವರ್ಟಿಕಲ್ ಎಕ್ಸಿಸ್ ಗಾಳಿಯಂತ್ರ, ಮಳೆನೀರು ಕೊಯ್ಲು ಹಾಗೂ
ಸೋಲಾರ್ ಬೆಳಕಿನ ವ್ಯವಸ್ಥೆ ಇವುಗಳನ್ನು ಮುಖ್ಯ ಕೇಂದ್ರ ಹಾಗೂ ವಿವಿಧ ವಿಸ್ತರಣಾ ಕೇಂದ್ರಳಲ್ಲಿ
ಪ್ರದರ್ಶಿಸಲಾಗಿದೆ.
ಅಲ್ಲದೇ ವಿವಿಧ ತಾಂತ್ರಿಕ ಸೇವೆಗಳ ಮತ್ತು ತಂತ್ರಜ್ಞಾನ ವರ್ಗಾವಣೆ, ಆರೋಗ್ಯ ತಪಾಸಣಾ ಶಿಬಿರಗಳನ್ನು, ಜನ
ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮುಖ್ಯ ಕೇಂದ್ರ ಮತ್ತು ವಿವಿಧ ವಿಸ್ತರಣಾ ಕೇಂದ್ರಗಳಲ್ಲಿ
ನಡೆಸಿದ್ದೇವೆ.
ಪ್ರಸ್ತುತ ಈ ಯೋಜನೆಯನ್ನು ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯಕ್ಕೆ
ವರ್ಗಾಯಿಸಲಾಗಿರುತ್ತದೆ.