ಪ್ರಥಮ ಸೆಮಿಸ್ಟರ್ ಡಿಪ್ಲೋಮ ಪ್ರವೇಶ
ಪ್ರಥಮ ವರ್ಷದ ಸರ್ಕಾರಿ /ಅನುದಾನಿತ /ಖಾಸಗಿ ( surrendered seats ) ಪಾಲಿಟೆಕ್ನಿಕ್ ಗಳಿಗೆ ಪ್ರವೇಶವನ್ನು
Karnataka Examination Authority(KEA) ಮತ್ತು NIC ಸಹಯೋಗದೊಂದಿಗೆ ಮಾಡಲಾಗುವುದು. ಪ್ರವೇಶ ಪ್ರಕ್ರಿಯೆಯು
ಸಾಮಾನ್ಯವಾಗಿ ರಾಜ್ಯದ ಸುದ್ದಿ ಪತ್ರಿಕೆಗಳಲ್ಲಿ ಅಧಿಸೂಚನೆಯನ್ನು ಹೊರಡಿಸುವ ಮುಖಾಂತರ ಪ್ರಾರಂಭವಾಗುತ್ತದೆ.
ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಸಾಮಾನ್ಯವಾಗಿ SSLC ಫಲಿತಾಂಶಗಳನ್ನು ಘೋಷಿಸುವ ದಿನಾಂಕದ ಸುತ್ತ
ಮುತ್ತ ಜಾಹಿರಾತನ್ನು ಪ್ರಕಟಿಸಲಾಗುವುದು. ಈ
ಪ್ರಕಟನೆಯನ್ನು http://dte.kar.nic.in ಮತ್ತು www.kea.kar.nic.in ವೆಬ್ ಸೈಟ್
ನಲ್ಲಿ ಪ್ರಕಟಿಸಲಾಗುವುದು ಹಾಗೂ ನಮ್ಮ ಪಾಲಿಟೆಕ್ನಿಕ್ ನ ವೆಬ್ ಸೈಟ್ ನಲ್ಲಿ ಕೂಡ ಪ್ರವೇಶ ಪ್ರಕಟಣೆಯ ವಿವರಗಳನ್ನು
ನೋಡಬಹುದಾಗಿದೆ. ಹಾಗೂ ನಮ್ಮ ಸಂಸ್ಥೆಯನ್ನು ದಾಖಲಾ ಪರಿಶೀಲನಾ ಕೇಂದ್ರ ಎಂದು ಪರಿಗಣಿಸಲಾಗಿದೆ. ಆದ್ದರಿಂದ
ವಿದ್ಯಾರ್ಥಿಗಳು ನಮ್ಮ ಸಂಸ್ಥೆಯನ್ನು ಅರ್ಜಿಯನ್ನು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರವೇಶ ಪ್ರಕ್ರಿಯೆ
ಅಭ್ಯರ್ಥಿಗಳು ಸ್ವತಃ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್
ಸೈಟ್ www.kea.kar.nic.in ಮತ್ತು http://dte.kar.nic.in ಗಳಲ್ಲಿರುವ ಅರ್ಜಿ ನಮೂನೆ
ಹಾಗೂ ಮಾಹಿತಿ ಪುಸ್ತಕವನ್ನು ಡೌನ್ ಲೋಡ್ ಮಾಡಿಕೊಂಡು ಅರ್ಜಿಯನ್ನು ಮಾಹಿತಿ ಪುಸ್ತಕದಲ್ಲಿರುವ ಸೂಚನೆಗಳನ್ವಯ
ಸಂಪೂರ್ಣ ಭರ್ತಿ ಮಾಡುವುದು. ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ನೋಡಲ್ ಕೇಂದ್ರಗಳ ಮೂಲಕ ಸೀಟು ಆಯ್ಕೆ
ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಇಚ್ಛೆಗೆ ಅನುಗುಣವಾಗಿ ರಾಜ್ಯದ ಯಾವುದೇ ಪಾಲಿಟೆಕ್ನಿಕ್ ಗಳಲ್ಲಿ
ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.
ಡಿಪ್ಲೋಮಾ ಪ್ರವೇಶಕ್ಕೆ ಇರಬೇಕಾದ ಅರ್ಹತೆ
ಲ್ಯಾಟರಲ್ ಎಂಟ್ರಿ ಕೋಟಾ (20% of intake)
I.T.I ಪಾಸಾದ ವಿದ್ಯಾರ್ಥಿಗಳು ಲ್ಯಾಟರಲ್ ಎಂಟ್ರಿ ಮುಖಾಂತರ 3ನೇ ಸೆಮಿಸ್ಟರ್ /2ನೇ ವರ್ಷ ಡಿಪ್ಲೋಮಾ ಪ್ರವೇಶ
ಪಡೆಯಲು ಇಚ್ಛಿಸಿದಲ್ಲಿ ಅಂತಹ ಅಭ್ಯರ್ಥಿಗಳು ಆನ್-ಲೈನ್ ಮುಖಾಂತರವೇ ನೋಡಲ್ ಕೇಂದ್ರಗಳ ಮೂಲಕ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಪಾಲಿಟೆಕ್ನಿಕ್ ಗಳ ಪ್ರಾಂಶುಪಾಲರುಗಳನ್ನು ಸಂಪರ್ಕಿಸುವುದು. ಈ ಕೋಟಾದಲ್ಲಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಅಂಗೀಕೃತವಾದ ಜೆ.ಟಿ.ಎಸ್ (ಕಿರಿಯ ತಾಂತ್ರಿಕ ಶಾಲೆಗಳು) ನಲ್ಲಿ SSLC
ಉತ್ತೀರ್ಣರಾಗಿ ಒಟ್ಟಾರೆಯಾಗಿ ಶೇ.35 ಅಂಕಗಳನ್ನು ಪಡೆದಿರಬೇಕು. ಸದರಿ ಅಭ್ಯರ್ಥಿಗಳು ಜೆ.ಟಿ.ಎಸ್ ಕೋಟಾದಲ್ಲಿ
ಕಾಯ್ದಿರಿಸಿರುವ ಸ್ಥಾನಗಳಿಗೆ ಮಾತ್ರ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಜೆ. ಟಿ .ಎಸ್ ನ (03 ವರ್ಷಗಳ ಅವಧಿ )
ಮತ್ತು ಐ.ಟಿ.ಐ ನ (02 ವರ್ಷಗಳ ಅವಧಿ) ಸಂಬಂಧಿಸಿದ ಟ್ರೇಡ್ ನಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಆಯಾ
ಟ್ರೇಡ್ ನ ಅರ್ಹತೆಗನುಗುಣವಾಗಿ ಡಿಪ್ಲೋಮಾ ಕೋರ್ಸಿಗೆ ಪರಿಗಣಿಸಲಾಗುವುದು.